ಮುಖ್ಯ ವಿಷಯಕ್ಕೆ ಹೋಗಿ

ನಾನು ದಾರಿತಪ್ಪಿದ್ದೇನೆ, ಮುರಿದುಹೋಗಿದ್ದೇನೆ...

Person walking

“ನಾನು ದಾರಿತಪ್ಪಿದ್ದೇನೆ, ನಿರೀಕ್ಷೆಯಿಲ್ಲದವನಾಗಿದ್ದೇನೆ, ಮುರಿದುಹೋಗಿದ್ದೇನೆ ಮತ್ತು ಒಂಟಿಯಾಗಿದ್ದೇನೆ. ಈ ವ್ಯರ್ಥ ಜೀವನದೊಂದಿಗೆ ನಾನೊಬ್ಬನೇ ಹೋರಾಡುತ್ತಿದ್ದೇನೆ, ನನ್ನ ಬಗ್ಗೆ ಯಾರಿಗೂ ಕಾಳಜಿಯಿಲ್ಲ.” – ಕೆಲವೊಮ್ಮೆ ನಮಗೆ ಹೀಗೆ ಅನಿಸುತ್ತದೆ.

22ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು;
ಆತನು ನಿನ್ನನ್ನು ಉದ್ಧಾರಮಾಡುವನು.
ನೀತಿವಂತನನ್ನು ಎಂದಿಗೂ ಕದಲಗೊಡಿಸನು.
( ಕೀರ್ತ 55:22 )
18ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ;
ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.
( ಕೀರ್ತ 34:18 )

ಮೊದಲನೆಯದಾಗಿ, ನೀವು ಒಂಟಿಯಲ್ಲ. ಭೂಮಿಯನ್ನೂ ಆಕಾಶವನ್ನೂ ಸೃಷ್ಟಿಸಿದ ನಮ್ಮ ದೇವರು ಈಗ ನಿಮ್ಮ ಹತ್ತಿರದಲ್ಲೇ ಇದ್ದಾನೆ. ಆತನೇ ನಿಮ್ಮನ್ನು ಈ ಪುಟಕ್ಕೆ ಕರೆತಂದಿದ್ದಾನೆ. ಈ ಲೋಕದಲ್ಲಿ ಆಕಸ್ಮಿಕಗಳೆಂಬುದಿಲ್ಲ; ದೇವರ ಕಾಳಜಿಯಿಲ್ಲದೆ ಯಾವುದೂ ಸಂಭವಿಸುವುದಿಲ್ಲ.

29ಕಾಸಿಗೆ ಎರಡು ಗುಬ್ಬಿಗಳನ್ನು ಮಾರುವುದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳದು.
( ಮತ್ತಾ 10:29 )

ನಿಮ್ಮ ದೇವರಾದ ಕರ್ತನ ಮುಂದೆ ನಿಮ್ಮ ಹೃದಯವನ್ನು ತೆರೆಯಿರಿ, ಭಯಪಡಬೇಡಿ.

28 “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿ ಕೊಡುವೆನು. 2911:29 ಯೆರೆ 6:16; ಯೋಹಾ 13:15; ಫಿಲಿ. 2:5, 7, 8:ನಾನು ಸಾತ್ವಿಕನೂ ದೀನಹೃದಯನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತುಕೊಳ್ಳಿರಿ, ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು. 30ಏಕೆಂದರೆ ನನ್ನ ನೊಗವು ಮೃದುವಾದದ್ದು, ನನ್ನ ಹೊರೆಯು ಹಗುರವಾದದ್ದು ಆಗಿದೆ”ಅಂದನು.
( ಮತ್ತಾ 11:28-30 )
10ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ, ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು.
ನಾನು ನಿನ್ನನ್ನು ಬಲಪಡಿಸುತ್ತೇನೆ. ಹೌದು, ನಿನಗೆ ಸಹಾಯಮಾಡುತ್ತೇನೆ. ನನ್ನ ಧರ್ಮದ ಬಲಗೈಯನ್ನು ನಿನಗೆ ಆಧಾರಮಾಡುತ್ತೇನೆ.
( ಯೆಶಾ 41:10 )

ನೀವು ಅನುಭವಿಸುತ್ತಿರುವ ನೋವು, ನಿಮಗಿರುವ ಕಷ್ಟಗಳು ಇನ್ನು ಮುಂದೆ ನಿಮ್ಮ ಕಷ್ಟಗಳಲ್ಲ. ಈಗ ಅವು ನಿಮ್ಮ ದೇವರಾದ ಕರ್ತನ ಕಷ್ಟಗಳಾಗಿವೆ.

22ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು;
ಆತನು ನಿನ್ನನ್ನು ಉದ್ಧಾರಮಾಡುವನು.
ನೀತಿವಂತನನ್ನು ಎಂದಿಗೂ ಕದಲಗೊಡಿಸನು.
( ಕೀರ್ತ 55:22 )
75:7 ಕೀರ್ತ 37:5; 55:22; ಮತ್ತಾ 6:25:ನಿಮ್ಮ ಚಿಂತಾಭಾರವನ್ನೆಲ್ಲಾ ಆತನ ಮೇಲೆ ಹಾಕಿರಿ ಆತನು ನಿಮಗೋಸ್ಕರ ಚಿಂತಿಸುತ್ತಾನೆ.
( 1 ಪೇತ್ರ 5:7 )

ಈಗ, ನಿಮ್ಮ ಹೃದಯವನ್ನು ತೆಗೆದುಕೊಳ್ಳಿ. ನಿಮ್ಮನ್ನು ಇಲ್ಲಿಗೆ ಕರೆತಂದ ಆ ಹೃದಯವನ್ನು ಕರ್ತನಿಗೆ ಒಪ್ಪಿಸಿಕೊಡಿ.

26ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನೂತನ ಸ್ವಭಾವವನ್ನು ಹುಟ್ಟಿಸುವೆನು; ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು. 27ನನ್ನ ಆತ್ಮವನ್ನು ನಿಮ್ಮಲ್ಲಿ ನೆಲಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವಿರಿ.
( ಯೆಹೆ 36:26-27 )

ನೀವು ಪಡೆದ ಆತ್ಮವು ನಿಮ್ಮ ಹಳೆಯ ವ್ಯಕ್ತಿತ್ವದ ಆತ್ಮವಲ್ಲ, ಭಯದ ಆತ್ಮವಲ್ಲ.

7ದೇವರು ನಮಗೆ ಕೊಟ್ಟಿರುವ ಆತ್ಮವು 1:7 ಲೂಕ 24:49; ಅ. ಕೃ. 1:8ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು 1:7 ರೋಮಾ. 8:15; ಯೋಹಾ 14:27; ಪ್ರಕ 21:8ಹೇಡಿತನದ ಆತ್ಮವಲ್ಲ.
( 2 ತಿಮೊ 1:7 )

ನಿಮ್ಮೊಳಗಿರುವ ಆತ್ಮವನ್ನು, ಹೊಸ ನಿಮ್ಮನ್ನು ಅನುಭವಿಸಿರಿ.

13ನಿರೀಕ್ಷೆಯನ್ನು ಕೊಡುವ ದೇವರು ಪವಿತ್ರಾತ್ಮನ ಶಕ್ತಿಯಿಂದ ಸಮೃದ್ಧವಾದ ನಿರೀಕ್ಷೆಯುಳ್ಳವರಾಗಿ ನಂಬುವುದರಿಂದ ಉಂಟಾಗುವ 15:13 ರೋಮಾ. 5:1-2, 14:17ಸಂತೋಷವನ್ನೂ ಮನಶ್ಯಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಲ್ಲಿ, ನೀವು ಪವಿತ್ರಾತ್ಮನಲ್ಲಿ ಬಲಗೊಂಡವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ.
( ರೋಮಾ 15:13 )

ಈ ಆತ್ಮವು ತಾತ್ಕಾಲಿಕವಲ್ಲ, ಇದು ಕೇವಲ ಇಂದಿಗೆ ಮಾತ್ರವಲ್ಲ...

39ಮಹತ್ವಗಳಾಗಲಿ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲು ಸಾಧ್ಯವಿಲ್ಲವೆಂದು ನಾವು ಬಲ್ಲವರಾಗಿದ್ದೇವೆ.
( ರೋಮಾ 8:39 )

ಈಗ, ನಿಮ್ಮ ಹಳೆಯ ಜೀವನವನ್ನು ಬಿಟ್ಟು, ನಮ್ಮ ಏಕೈಕ ರಕ್ಷಕನೂ ಜೀವವುಳ್ಳ ದೇವರ ಮಗನೂ ಆದ ಯೇಸು ಕ್ರಿಸ್ತನನ್ನು ಹಿಂಬಾಲಿಸಿರಿ.

12ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, 8:12 ಯೋಹಾ 1, 4, 5; 9:5; 12:35; ಯೆಶಾ 42:6:“ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವನು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ, ಆದರೆ ಅವನು ಜೀವದ ಬೆಳಕನ್ನು ಹೊಂದಿರುವನು” ಎಂದು ಹೇಳಿದನು.
( ಯೋಹಾ 8:12 )
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 (IRVKan)