ಮುಖ್ಯ ವಿಷಯಕ್ಕೆ ಹೋಗಿ

christianity

ಯೇಸು ಯಾರು, ಮತ್ತು ಅವನು ಏಕೆ ಇಷ್ಟೊಂದು ಮುಖ್ಯ?

ಯೇಸು ಯಾರು?

ಮನುಷ್ಯನೇ? ಪ್ರವಾದಿಯೇ? ದೇವರ ಮಗನೇ, ಅಥವಾ ಸ್ವತಃ ದೇವರೇ? ಅವನಲ್ಲಿ ನಿಜವಾಗಿಯೂ ವಿಶೇಷವಾದದ್ದು ಏನಾದರೂ ಇದೆಯೇ?

ಅವನು ಕಟ್ಟುವವರು ತಿರಸ್ಕರಿಸಿದ ಮೂಲೆಗಲ್ಲಾಗಿದ್ದನು; ತೋರಾ ಪಂಡಿತರಿಂದ ತಿರಸ್ಕರಿಸಲ್ಪಟ್ಟ, ಮಾನವಕುಲವು ಎಡವಿ ಬೀಳುವಂತೆ ಮಾಡಿದ ಕಲ್ಲಾಗಿದ್ದನು. ಆದರೂ ಅವನು ಭೂಮಿಯ ಮೇಲೆ ಎಂದಿಗೂ ಜೀವಿಸಿದವರಲ್ಲಿ ಅತ್ಯಂತ ಪ್ರಸಿದ್ಧ ವ್ಯಕ್ತಿಯಾದನು. ಅವನ ಜೀವನ ಮತ್ತು ಬೋಧನೆಗಳು ಮಾನವಕುಲವನ್ನು ಅಬ್ರಹಾಮಿಕ್ ಧರ್ಮಗಳ ಮೂರು ಮಹಾ ಶಾಖೆಗಳಾಗಿ ವಿಭಜಿಸಿದವು.

ಅವನು ಮಾನವಕುಲಕ್ಕಾಗಿ ಮಾಡಿದ ಕಾರ್ಯದಲ್ಲಿ ಅಷ್ಟೊಂದು ವಿಶೇಷವೇನು? ಅದು ಹೇಗೆ ಸಂಭವಿಸಿತು, ಮತ್ತು ಏಕೆ? ಬನ್ನಿ, ತಿಳಿದುಕೊಳ್ಳೋಣ.

"ನಿಮ್ಮ ಶತ್ರುಗಳನ್ನು ಪ್ರೀತಿಸಿ" ಎಂದರೆ ಏನರ್ಥ?

ಅಸಾಧ್ಯವೆಂದು ತೋರುವ ಆಜ್ಞೆ

ನಾವು ನಮ್ಮ ನೆರೆಯವರನ್ನು, ಕುಟುಂಬವನ್ನು ಮತ್ತು ಸ್ನೇಹಿತರನ್ನು ಪ್ರೀತಿಸಬಹುದು. ಆದರೆ ಶತ್ರುವನ್ನು ಪ್ರೀತಿಸುವುದು ಎಂದರೆ ಏನು? ನಾವು ಹಾಗೆ ಮಾಡುವುದು ನಿಜವಾಗಿಯೂ ಅಗತ್ಯವೇ?

ಯಾಕೋಬನು ದೇವರೊಂದಿಗೆ ಕುಸ್ತಿಯಾಡಿ ಗೆದ್ದನು. ಇದರ ಅರ್ಥವೇನು?

ಯಾಕೋಬನು ತನ್ನ ಸಹೋದರ ಏಸಾವನನ್ನು ಭೇಟಿಯಾಗಲು ಮನೆಗೆ ಹಿಂತಿರುಗುತ್ತಿದ್ದಾಗ, ರಾತ್ರಿಯೆಲ್ಲಾ ದೇವರೊಂದಿಗೆ ಕುಸ್ತಿಯಾಡಿದನು, ಮತ್ತು ಬೆಳಗಾಗುವಾಗ ಅವನು ಗೆದ್ದಿದ್ದಾನೆಂದು ಹೇಳಲಾಯಿತು. ಇದರ ಅರ್ಥವೇನು? ಕೇವಲ ಮನುಷ್ಯನು ದೇವರ ವಿರುದ್ಧ ಹೇಗೆ ಗೆಲ್ಲಬಲ್ಲನು?

ನದಿಯ ಬಳಿಯ ರಾತ್ರಿ

ಯಾಕೋಬನು ಇಪ್ಪತ್ತು ವರ್ಷಗಳ ನಂತರ ಹಿಂತಿರುಗುತ್ತಿದ್ದನು. ಏಸಾವನು ಅವನನ್ನು ಕೊಲ್ಲಲು ಬಯಸಿದ್ದರಿಂದ ಅವನು ಒಮ್ಮೆ ಮನೆಯನ್ನು ಬಿಟ್ಟಿದ್ದನು. ಈಗ ಏಸಾವನು ಸೈನ್ಯದೊಂದಿಗೆ ತನ್ನನ್ನು ಭೇಟಿಯಾಗಲು ಬರುತ್ತಿದ್ದಾನೆಂದು ಅವನು ಕೇಳಿದನು:

ನಾವು ದೇವರನ್ನು ಹೇಗೆ ಹಿಂಬಾಲಿಸುವುದು? ನಾವು ಹೇಗೆ ಜೀವಿಸಬೇಕೆಂದು ದೇವರು ಬಯಸುತ್ತಾನೆ?

ನಮ್ಮ ಜೀವನದಲ್ಲಿ, ವಯಸ್ಸು ಹೆಚ್ಚಿದಂತೆ, ಸರಿಯಾಗಿ ಹೇಗೆ ಜೀವಿಸುವುದು, ಯೋಗ್ಯವಾಗಿ ಹೇಗೆ ನಡೆದುಕೊಳ್ಳುವುದು, ಸಂತೋಷವನ್ನೂ ಜೀವನದ ನಿಜವಾದ ಅರ್ಥವನ್ನೂ ಎಲ್ಲಿ ಹುಡುಕುವುದು ಎಂಬ ಆಲೋಚನೆಗಳು ಆಗಾಗ ನಮಗೆ ಬರುತ್ತವೆ. ದುಬಾರಿ ವಸ್ತುಗಳನ್ನು ಕೊಳ್ಳುವುದರಲ್ಲಾಗಲಿ ನಮ್ಮ ಸಾಧನೆಗಳಲ್ಲಾಗಲಿ ನಮಗೆ ತೃಪ್ತಿ ಸಿಗುವುದಿಲ್ಲ...

ಯೇಸು ನಮ್ಮ ಜೀವವನ್ನು ರಕ್ಷಿಸುವುದರಬಗ್ಗೆ ನಾವು ಕೇಳಿದ್ದೇವೆ. ಅಷ್ಟೇ ಸಾಕೇ, ಅಥವಾ ನಾವೂ ಸ್ವತಃ ಏನಾದರೂ ಮಾಡಬೇಕೇ?

ಇಷ್ಟೊಂದು ಕ್ರೈಸ್ತ ಸಭೆಗಳು ಏಕೆ ಇವೆ?

ಲೋಕದಲ್ಲಿ ಅನೇಕಾನೇಕ ಸಭೆಗಳಿವೆ, ಪ್ರತಿಯೊಂದಕ್ಕೂ ತನ್ನದೇ ಆದ ಸಂಪ್ರದಾಯಗಳು, ವಿಧಿಗಳು ಮತ್ತು ನಂಬಿಕೆಗಳಿವೆ. ನಾವು ಯಾವುದಕ್ಕೆ ಸೇರಬೇಕು?

ಕ್ಯಾಥೊಲಿಕ್, ಆರ್ಥೊಡಾಕ್ಸ್, ಬ್ಯಾಪ್ಟಿಸ್ಟ್, ಲೂಥರನ್, ಮೆಥಡಿಸ್ಟ್, ಪ್ರೆಸ್ಬಿಟೇರಿಯನ್… ಡಜನ್‌ಗಟ್ಟಲೆ ಪ್ರಮುಖ ಕ್ರೈಸ್ತ ಪಂಗಡಗಳಿವೆ, ಮತ್ತು ಅನೇಕ ಸಭೆಗಳು ವಿಧಿಗಳಲ್ಲಿ ಮತ್ತು ನಂಬಿಕೆಗಳಲ್ಲಿರುವ ಭಿನ್ನತೆಗಳನ್ನು ಎತ್ತಿತೋರಿಸುತ್ತಾ ಇತರ ಸಭೆಗಳಿಂದ ಆಗಾಗ್ಗೆ ತಮ್ಮನ್ನು ದೂರವಿಟ್ಟುಕೊಳ್ಳುತ್ತವೆ.

ಪ್ರತಿಯೊಬ್ಬನೂ ತನಗೆ ಹೆಚ್ಚು ಹೊಂದುವ ಸಭೆಗೆ ಸೇರುವಂತೆ ಬೇರೆ ಬೇರೆ ಸಭೆಗಳಿರುವುದು ಕ್ರೈಸ್ತಧರ್ಮಕ್ಕೆ ಒಳ್ಳೆಯದೇ?

ಕ್ರೈಸ್ತರ ನಡುವಿನ ಭಿನ್ನತೆಗಳು ಅಪೊಸ್ತಲನಾದ ಪೌಲನ ದಿನಗಳಲ್ಲೇ ಆರಂಭವಾದವು. ಕೊರಿಂಥದಲ್ಲಿದ್ದ ಸಭೆಗೆ ಅವನು ಬರೆದದ್ದು ಇದು.

ಸಾಂಕ್ರಾಮಿಕ ರೋಗಕ್ಕೆ ಕ್ರೈಸ್ತರ ಪ್ರತಿಕ್ರಿಯೆ ಏನು?

ನಿಯಂತ್ರಿಸಲಾಗದ ಒಂದು ವೈರಸ್ ದೊಡ್ಡ ಬಿರುಗಾಳಿಯಂತೆ ಖಂಡಗಳಾದ್ಯಂತ ಸಂಚರಿಸುತ್ತಾ ನಮ್ಮ ಸುತ್ತಲಿನ ಜನರಿಗೆ ಸೋಂಕು ತಗುಲಿಸುತ್ತಿದೆ. ನಮ್ಮಲ್ಲಿ ಕೆಲವರಿಂದ ಅದು ಉದ್ಯೋಗಗಳನ್ನೂ ನಾವು ಪ್ರೀತಿಸಿದವರ ಜೀವಗಳನ್ನೂ ಕಸಿದುಕೊಳ್ಳುತ್ತದೆ. ಯಾವುದೇ ಚಿಕಿತ್ಸೆಯಿಲ್ಲದ ವೈರಸ್‌ನ ಮುಂದೆ ನಾವು ನಿರೀಕ್ಷೆಯಿಲ್ಲದವರಂತೆ ಭಾವಿಸುತ್ತೇವೆ. ಬಿರುಗಾಳಿಯ ನಡುವೆ ಒಂದು ಚಿಕ್ಕ ದೋಣಿಯಲ್ಲಿ ತೇಲುತ್ತಿರುವಂತೆ ನಮಗೆ ಅನಿಸುತ್ತದೆ.